ಡಾ. ಶರತ್ ಮರಿಯಪ್ಪ ಫೌಂಡೇಶನ್ ,ಜಯನಗರ ಶಿವಮೊಗ್ಗ

ನಮ್ಮ ದೃಷ್ಟಿ

ದಯೆ, ಸಹಕಾರ ಮತ್ತು ಸಮಾನ ಅವಕಾಶಗಳ ಆಧಾರದ ಮೇಲೆ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಸಾಮರ್ಥ್ಯವನ್ನು ಗುರುತಿಸಿ ಯಶಸ್ವಿ ಜೀವನ ಕಟ್ಟಿಕೊಳ್ಳುವ ಶಕ್ತಿಶಾಲಿ ಸಮಾಜವನ್ನು ನಿರ್ಮಿಸುವುದು ನಮ್ಮ ದೃಷ್ಟಿಯಾಗಿದೆ. ಉತ್ತಮ ಮಾರ್ಗದರ್ಶನದ ಮೂಲಕ ಯುವಜನರು ಮತ್ತು ಸಮಾಜವನ್ನು ಉಜ್ವಲ ನಾಳೆಯತ್ತ ಕೊಂಡೊಯ್ಯುವುದು ನಮ್ಮ ಗುರಿ.

Shape

ನಮ್ಮ ಮೌಲ್ಯಗಳು

Shape
  • ಮಾನವೀಯತೆ, ಪ್ರತಿಯೊಬ್ಬರನ್ನೂ ಗೌರವದಿಂದ ಕಾಣುತ್ತಾ, ಅಗತ್ಯವಿರುವವರಿಗೆ ಸಹಾಯ ಮತ್ತು ಬೆಂಬಲ ನೀಡುವುದು.
  • ಸೇವೆ, ನಿಸ್ವಾರ್ಥ ಸೇವೆಯ ಮೂಲಕ ಸಮಾಜದ ಒಳಿತಿಗಾಗಿ ಮತ್ತು ಜನರ ಜೀವನದಲ್ಲಿ ಉತ್ತಮ ಬದಲಾವಣೆಗಾಗಿ ಕಾರ್ಯನಿರ್ವಹಿಸುವುದು.
  • ಮಾರ್ಗದರ್ಶನ, ಸರಿಯಾದ ಮಾಹಿತಿ, ಸಲಹೆ ಮತ್ತು ಪ್ರೇರಣೆಯ ಮೂಲಕ ವ್ಯಕ್ತಿಗಳು ತಮ್ಮ ಗುರಿಗಳನ್ನು ತಲುಪಲು ನೆರವಾಗುವುದು.
  • ದಯೆ ಮತ್ತು ಸಹಕಾರ, ದಯೆ, ಸಹಾನುಭೂತಿ ಮತ್ತು ಒಗ್ಗಟ್ಟಿನ ಮನೋಭಾವದೊಂದಿಗೆ ಸಮಾಜದ ಅಭಿವೃದ್ಧಿಗೆ ಕೈಜೋಡಿಸುವುದು.
  • ಅವಕಾಶ ಮತ್ತು ಸಬಲೀಕರಣ, ಜನರಿಗೆ ಲಭ್ಯವಿರುವ ಅವಕಾಶಗಳ ಬಗ್ಗೆ ಅರಿವು ಮೂಡಿಸಿ, ತಮ್ಮ ಸಾಮರ್ಥ್ಯವನ್ನು ಬಳಸಿಕೊಂಡು ಸ್ವಾವಲಂಬಿಗಳಾಗಲು ಪ್ರೇರೇಪಿಸುವುದು.
  • ನಂಬಿಕೆ ಮತ್ತು ಪ್ರಾಮಾಣಿಕತೆ, ಪಾರದರ್ಶಕತೆ, ಪ್ರಾಮಾಣಿಕತೆ ಮತ್ತು ವಿಶ್ವಾಸದೊಂದಿಗೆ ನಮ್ಮ ಸೇವಾ ಕಾರ್ಯಗಳನ್ನು ನಿರ್ವಹಿಸುವುದು.

ನಮ್ಮ ಧ್ಯೇಯ

ಸಮಾಜದ ಪ್ರತಿಯೊಬ್ಬರಿಗೂ ಸಮಾನ ಅವಕಾಶ, ಶಿಕ್ಷಣ, ಆರೋಗ್ಯ, ಉದ್ಯೋಗ ಮತ್ತು ಸಾಮಾಜಿಕ ಬೆಂಬಲವನ್ನು ಒದಗಿಸುವ ಮೂಲಕ, ಸ್ವಾವಲಂಬಿ ಹಾಗೂ ಸಬಲ ಸಮಾಜವನ್ನು ನಿರ್ಮಿಸುವುದು.”ಉತ್ತಮ ಮಾರ್ಗದರ್ಶನದ ಮೂಲಕ ಯುವಜನರು ಮತ್ತು ಸಮಾಜವನ್ನು ಉಜ್ವಲ ನಾಳೆಯತ್ತ ಕೊಂಡೊಯ್ಯುವುದು ನಮ್ಮ ಗುರಿ.

Shape

ಸಮಾಜ ಸೇವೆಯ ಮುಖ್ಯ ಉದ್ದೇಶಗಳು

ಅಗತ್ಯವಿರುವವರಿಗೆ ನೆರವು

ಕಷ್ಟದಲ್ಲಿರುವವರಿಗೆ, ಆರ್ಥಿಕವಾಗಿ ಹಿಂದುಳಿದವರಿಗೆ ಆಹಾರ, ಬಟ್ಟೆ, ಶಿಕ್ಷಣ ಮತ್ತು ಆಶ್ರಯ ಒದಗಿಸುವುದು

ಸಮಾನತೆ ಸಾಕ್ಷಾತ್ಕಾರ

ಸಮಾಜದಲ್ಲಿನ ತಾರತಮ್ಯ, ಅಸ್ಪೃಶ್ಯತೆ ಮತ್ತು ಶೋಷಣೆಗಳನ್ನು ತಡೆಗಟ್ಟಿ, ಪ್ರತಿಯೊಬ್ಬರಿಗೂ ಗೌರವಾನ್ವಿತ ಜೀವನ ನಡೆಸಲು ಅವಕಾಶ ಕಲ್ಪಿಸುವುದು.

​ಸಾಮಾಜಿಕ ಜಾಗೃತಿ

ಆರೋಗ್ಯ, ನೈರ್ಮಲ್ಯ, ಸಾಕ್ಷರತೆ ಮತ್ತು ಪರಿಸರ ಕಾಳಜಿಯ ಕುರಿತು ಜನರಲ್ಲಿ ಅರಿವು ಮೂಡಿಸುವುದು.

  • ಶಿಕ್ಷಣ: ಬಡ ಮಕ್ಕಳಿಗೆ ಉಚಿತ ಶಿಕ್ಷಣ, ಪುಸ್ತಕ ವಿತರಣೆ, ಮತ್ತು ಶಾಲಾ ಮೂಲಸೌಕರ್ಯ ಅಭಿವೃದ್ಧಿ.
  • ಆರೋಗ್ಯ,ಉಚಿತ ರಕ್ತದಾನ ಶಿಬಿರಗಳು, ಉಚಿತ ವೈದ್ಯಕೀಯ ತಪಾಸಣೆ ಮತ್ತು ಔಷಧ ವಿತರಣೆ.
  • ಮಹಿಳಾ ಮತ್ತು ಮಕ್ಕಳ ಕಲ್ಯಾಣ , ಮಹಿಳಾ ಸಬಲೀಕರಣ, ಬಾಲ್ಯವಿವಾಹ ತಡೆ, ಮತ್ತು ಅನಾಥ ಮಕ್ಕಳ ಆರೈಕೆ.
  • ಉದ್ಯೋಗ , ವಿದ್ಯಾವಂತ ಯುವಜನತೆಗೆ ತಮ್ಮ ಔದ್ಯೋಗಿಕ ಬದುಕನ್ನು ಕಟ್ಟಿಕೊಳ್ಳಲು ಉದ್ಯೋಗ ಮೇಳಗಳ ಆಯೋಜನೆ.
  • ತರಬೇತಿ , ಸ್ಪರ್ಧಾತ್ಮಕ ಯುಗದಲ್ಲಿನ ಅಡೆತಡೆಗಳನ್ನು ಹಿಮ್ಮೆಟ್ಟಿಸಲು ಯುವಜನತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನ ಹೆದುರಿಸಲು ತರಬೇತಿ ಕಾರ್ಯಾಗಾರ ನಡೆಸುವುದು.
  • ಕ್ರೀಡೆ ,ಸಾರ್ವಜನಿಕರಲ್ಲಿ ತಮ್ಮ ಆರೋಗ್ಯದ ದೃಷ್ಟಿಯಿಂದ ಕ್ರೀಡೆಗಳನ್ನು ಆಯೋಜಿಸುವುದು.

ಡಾ. ಶರತ್ ಮರಿಯಪ್ಪ ಫೌಂಡೇಶನ್, ಶಿವಮೊಗ್ಗ ಸಮಾಜ ಸೇವೆ, ಶಿಕ್ಷಣ, ಉದ್ಯೋಗ ಮಾರ್ಗದರ್ಶನ ಹಾಗೂ ಜನಪರ ಕಾರ್ಯಕ್ರಮಗಳ ಮೂಲಕ ಸಮಾಜದ ಅಭಿವೃದ್ಧಿಗೆ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. ಉತ್ತಮ ನಾಳೆಗಾಗಿ ಅವಕಾಶಗಳನ್ನು ಸೃಷ್ಟಿಸುವುದು ನಮ್ಮ ಧ್ಯೇಯವಾಗಿದೆ.

Copyright © 2026 DR.SHARATH MARIYAPPA FOUNDATION SHIVAMOGGA| All Right Reserved